ಸಂಗೀತಾ ಮೋಹನ್ ಮಾಜಿ ಭಾರತೀಯ ಮಹಿಳಾ ಉದ್ದ ಜಿಗಿತಗಾರ್ತಿ.‍ ಇವರು ೨೦೦೪ ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಮತ್ತು ೨೦೦೪ ರ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ಸಂಗೀತಾ ಅವರು ೨೦೦೪ ರ ದಕ್ಷಿಣ ಏಷ್ಯನ್ ಕ್ರೀಡಾಕೂಟದಲ್ಲಿ ಮಹಿಳೆಯರ ಎತ್ತರ ಜಿಗಿತದಲ್ಲಿ ಚಿನ್ನದ ಪದಕವನ್ನು ಪಡೆದರು. ದಕ್ಷಿಣ ಏಷ್ಯನ್ ಕ್ರೀಡಾಕೂಟದ ಇತಿಹಾಸದಲ್ಲಿ ೧.೮೧ ಮೀ ಮಹಿಳೆಯರ ಎತ್ತರ ಜಿಗಿತದಲ್ಲಿ ದಾಖಲೆಯನ್ನು ಮಾಡಿದರು. ಇವರು ಮಲೇಷ್ಯಾದಲ್ಲಿ ನಡೆದ ೨೦೦೪ ರ ಏಷ್ಯನ್ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮಹಿಳೆಯರ ಎತ್ತರ ಜಿಗಿತದಲ್ಲಿ ಕಂಚಿನ ಪದಕವನ್ನು ಪಡೆದರು. == ಸಹ ನೋಡಿ == ದಕ್ಷಿಣ ಏಷ್ಯನ್ ಗೇಮ್ಸ್ ದಾಖಲೆಗಳ ಪಟ್ಟಿ == ಉಲ್ಲೇಖಗಳು ==